Thursday, 2 May 2019

"ಗುರುವಿನ ಪ್ರಾರ್ಥನೆ"

ಙ್ಙಾನಪೂಣ್೯ ಜಗನ್ಜೋತಿ ನಿರ್ಮಲವಾದ
ಮನವೇ ಕರ್ಪೂರದಾರತಿ
೧)ಅನುದಿನ ಗುರುವಿನೊಳನುಗೂಡಿ ಭಕ್ತಿಯಲ್ಲಿ
ಜನನ ಮರಣ ರಹಿತ ಜಂಗಮಗೆ ಬೆಳಗಿರಿ||
                                        ||ಙ್ಙಾನ||
೨) ನಾನ್ ನೀನ್ ಎಂಬುದ ಬಿಡಿರಿ ಸದ್ಗುರು ಪ್ರಾಪ್ತಿಗೆ ಜ್ಙಾನಿಗಳೊಡನಾಡಿರಿ||
ಸ್ವಾನುಭವದ ಸುಖ ತಾನೇ ಕೈಸೇರುವುದು||    ಅನುಭವಿಸಿ ಲಿಂಗಕ್ಕೆ ಅನುದಿನವು ಮನ ಒಪ್ಪಿ ಬೆಳಗಿರಿ                      ||ಙ್ಙಾನ||
೩)ನಾನಾ ಜನ್ಮದ ಕತ್ತಲೇ ಕಳೆದುಳಿದು ಬೇಗ ಮಾನವ ಜನ್ಮ  ಬೆಳಕಿನಲಿ||
ಹೀನ ವಿಷಯದಾಸೆ ಹಿಂದಳಿದು ಗುರುವಿನ
ದ್ಯಾನವೇ ಗತಿಯೆಂದು ಮನಮುಟ್ಟಿ ಬೆಳಗಿರಿ||
                                 ||ಙ್ಙಾನ್||
೪)ಅಷ್ಟವರ್ಣದ ಸ್ಥೂಲವ ಮಾನವ ಜನ್ಮ ಹುಟ್ಟಿ
ಬರುವುದೇ ದುರ್ಲಭ||
ಕೊಟ್ಟನೆ ಗುರು ಎಮಗೆ ಮುಕ್ತಿ ಮುಟ್ಟಿದ ಫಲದಿಂದ ಹುಟ್ಟಿದ ಮಗ ಸಿದ್ದ ಹೆಸರಿಟ್ಟು ಬೆಳಗಿರಿ ||
೫) ಙ್ಙಾನಪೂರ್ಣ ಜಗನ್ ಜ್ಯೋತಿ ನಿರ್ಮಲವಾದ ಮನವೇ ಕರ್ಪೂರದಾರತಿ
ಅನು ದಿನ ಗುರುವಿನೊಳಗೂಡಿ ಭಕ್ತಿಯಲಿ||
ಜನನ ಮರಣ ರಹಿತ ಜಂಗಮಗೆ ಬೆಳಗಿರಿ||
||| ಙ್ಙಾನಪೂರ್ಣ ಜಗನ್ ಜ್ಯೋತಿ |||

ಗಂಗೆ ತಟದಲಿ