Friday, 28 September 2018

ನಿನ್ನಾತ್ಮ ನಿಶ್ಚಯವಿರಲು!!
ಪರಮಾತ್ಮ ನಿಶ್ಚಯ ವಿರುವ ||

ರಂಗು ರಂಗಿ  ಹೂ.ಗಳು ಇರಲು
ಪೂಜೆಗೆ ರಂಗುಗಳಿವೆಯೇನು?|
ರಂಗಿನ ಹೂವೇ ನಿನ್ನಾತ್ಮ |
ಪೂಜೆಯೆಂಬುದೇ ಪರಮಾತ್ಮ||
                                    || ನಿನ್ನಾತ್ಮ||
ಬಣ್ಣ ಬಣ್ಣದ ಹಸುಗಳು ಇರಲು|
ಹಾಲಿಗೆ ಬಣ್ಣಗಳಿವೇನು?|
ಬಣ್ಣದ ಹಸುಗಳೇ ನಿನ್ನಾತ್ಮ
ಬಿಳಿನೊರೆ ಹಾಲೇ ಪರಮಾತ್ಮ||
                                ||ನಿನ್ನಾತ್ಮ||
ಅಂಕು ಡೊಂಕುಗಳು ಕಬ್ಬಿಗೆ ಇರಲು
ಒಳಗಿನ ಸಿಹಿಗೆ ಡೊಂಕೇನು?|
ಡೊಂಕಿನ ಕಬ್ಬೆ ನಿನ್ನಾತ್ಮ|
ಸಮನದ ಸಿಹಿಯೇ ಪರಮಾತ್ಮ|
                                ||ನಿನ್ನಾತ್ಮ||
ಏರಿಳಿತಗಳು ಅಲೆಗಳಿಗಿರಲು
ನೀರಿಗೆ ತಗ್ಗುಗಳಿವೆಯೇನು?
ಅಲೆಗಳು ಎಂಬುದೇ ನಿನ್ನಾತ್ಮ|
ನೀರು ಎಂಬುದೇ ಪರಮಾತ್ಮ|
                             ||ನಿನ್ನಾತ್ಮ||
ಭಜನೆಗೆ ನಾನಾ ರಾಗಗಳಿರಲು|
ಭಕ್ತಿಗೆ ರಾಗವು ಇದೆಯೇನು?|
ವಿಧವಿಧ ರಾಗವೇ ನಿನ್ನಾತ್ಮ|
ಭಕ್ತಿ ಎಂಬುದೇ ಪರಮಾತ್ಮ|
                            ||ನಿನ್ನಾತ್ಮ||
ನೋಟಕೆ ಕಮಾನು ಕಣ್ಗ ಗಳು ಇರಲು|
ದೃಷ್ಟಿ ಗೆ ದೋಷ ಇದೆಯೇನು?
ಕಮಾನು ಕಣ್ಗಳೇ ನಿನ್ನಾತ್ಮ|
ನೇರದೃಷ್ಷಿಯೇ ಪರಮಾತ್ಮ|
                           ||ನಿನ್ನಾತ್ಮ||

               

No comments:

Post a Comment

ಗಂಗೆ ತಟದಲಿ