Saturday, 20 January 2018

ಮನುಜನ ನಿಜವಾದ ಭಕ್ತಿ

ಎಂಥ ಭಕ್ತಿಯೊ ನಿನದು
ಓ ಮನುಜ ಎಂಥ ಭಕ್ತಿಯೊ ನಿನದು ? !!ಪಲ್ಲವಿ !!
-----------------------------------
ದೇವರು ದೇವರು ಎನ್ನುತ್ತಿಯ !!
ದೇವರ ಪೂಜೆ ಮಾಡುತ್ತಿಯ !
ನಿಜವಾದ ದೇವರು ಬಂದರೆ
ದೆವ್ವ ಬಂತೆಂದು ಓಡುತ್ತಿಯ. !! ಎಂಥ ಭಕ್ತಿಯೊ?

ಗಣಪ ಗಣಪ  ಎನ್ನುತ್ತಿಯ !!
ಗಣಪನ ಪೂಜೆ ಮಾಡುತ್ತಿಯ !
ನಿಜವಾದ ಗಣಪ ಬಂದರೆ
ಆನೆ ಬಂತೆಂದು ಓಡುತ್ತಿಯಾ.   !!ಎಂಥ ಭಕ್ತಿಯೊ

ಹನುಮ ಹನುಮ ಎನ್ನುತ್ತಿಯಾ !!
ಹನುಮನ ಪೂಜೆ ಮಾಡುತ್ತಿಯಾ !
ನಿಜವಾದ ಹನುಮ ಬಂದರೆ !
ಕೋತಿ ಬಂತೆಂದೊಡುತ್ತಿಯಾ.  !!ಎಂಥ ಭಕ್ತಿಯೊ ?

ಬಸವ ಬಸವ ಎನ್ನುತ್ತಿಯಾ !!
ಬಸವನ ಪೂಜೆ ಮಾಡುತ್ತಿಯ !
ನಿಜವಾದ ಬಸವ ಬಂದರೆ
ಗೂಳಿ ಬಂತೆಂದು ಓಡುತ್ತಿಯಾ !!  ಎಂಥ ಭಕ್ತಿಯೊ?

ಉರುಗ ಉರುಗ ಎನ್ನುತ್ತಿಯಾ !!
ಉರುಗನ ಪೂಜೆ ಮಾಡುತ್ತಿಯಾ !
ನಿಜವಾದ ಉರುಗ ಬಂದರೆ ಹಾವು ಬಂತೆಂದೊಡುತ್ತಿಯಾ !!   ಎಂಥ ಭಕ್ತಿಯೊ ?

ಮುರುಗ ಮುರುಗ ಎನ್ನುತ್ತಿಯಾ !!
ಮುರುಗನ ಪೂಜೆ ಮಾಡುತ್ತಿಯಾ !
ನಿಜವಾದ ಮರುಗ ಬಂದರೆ ನವಿಲು ಬಂತೆಂದೊಡುತ್ತಿಯಾ !!  ಎಂಥ ಭಕ್ತಿಯೊ ?

ಅಲ್ಲ ಅಲ್ಲ ಎನ್ನುತ್ತಿಯಾ ?
ಅಲ್ಲನ ಪೂಜೆ ಮಾಡುತ್ತಿಯಾ !!
(ಅಲ್ಲನ ಪೂಜೆ ಮಾಡೊಲ್ಲ ಬಿಡ್ರಿ)
ನಿಜವಾದ ಅಲ್ಲ ಬಂದರೆ ಇಲ್ಲ ಇಲ್ಲ ಎಂದೊಡುತ್ತಿಯಾ!!   ಎಂಥ ಭಕ್ತಿಯೋ !!


                              

1 comment:

ಗಂಗೆ ತಟದಲಿ